ಬೆಂಗಳೂರು, ಜೂನ್ 21, 2025:
ಬಿ.ಟಿ.ಎಂ ವಿಧಾನಸಭಾ ಕ್ಷೇತ್ರದ ಎನ್.ಎಸ್.ಪಾಳ್ಯದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನವೀಕರಿಸಿ, ಹೊಸ ಮೊದಲ ಮಹಡಿಯನ್ನು ನಿರ್ಮಿಸಿ ರಾಮಲಿಂಗಾ ರೆಡ್ಡಿ (ಸ್ಥಳೀಯ ಶಾಸಕ ಮತ್ತು ಸಾರಿಗೆ, ಮುಜರಾಯಿ ಸಚಿವ) ಅವರು ಲೋಕಾರ್ಪಣೆ ಮಾಡಿದ್ದಾರೆ. ಅಂದಾಜು 90 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಆಸ್ಪತ್ರೆಯನ್ನು ಸುಸಜ್ಜಿತವಾಗಿ ಅಧುನಿಕಗೊಳಿಸಲಾಗಿದೆ.
ಸೌಲಭ್ಯಗಳು:
- ಆಯುಷ್ಮಾನ್ ಕ್ಲಿನಿಕ್:
- ಸೋಮವಾರ: ಸ್ತ್ರೀ ರೋಗ ತಜ್ಞರ (OBG) ಉಚಿತ ಸೇವೆ.
- ಮಂಗಳವಾರ: ಮಕ್ಕಳ ತಜ್ಞರ (ಪೀಡಿಯಾಟ್ರೀಷಿಯನ್) ಉಚಿತ ಸಲಹೆ.
- ಸ್ಮಾರ್ಟ್ ಕ್ಲಿನಿಕ್:
- ಆನ್ಲೈನ್ ಕನ್ಸಲ್ಟೇಷನ್: ಚರ್ಮರೋಗ ತಜ್ಞರು (ಡರ್ಮಟಾಲಜಿಸ್ಟ್), ENT, ಮೂಳೆ ತಜ್ಞರು (ಆರ್ಥೋಪೆಡಿಕ್), ಕಣ್ಣಿನ ವೈದ್ಯರು (ಆಪ್ತಾಲ್ಮಾಲಜಿಸ್ಟ್) ರೋಗಿಗಳಿಗೆ ಉಚಿತ ಸೇವೆ.
- ಗುರುವಾರ: ಮಕ್ಕಳಿಗೆ ಲಸಿಕೆಕಾರ್ಯಕ್ರಮ (ವ್ಯಾಕ್ಸಿನೇಷನ್).
ಸಚಿವ ರಾಮಲಿಂಗಾ ರೆಡ್ಡಿ ಅವರು ಮಾತನಾಡಿ, “ಬಿ.ಟಿ.ಎಂ ಕ್ಷೇತ್ರವು ಶಿಕ್ಷಣ, ಆರೋಗ್ಯ, ಮೂಲಸೌಕರ್ಯದಲ್ಲಿ ಮಾದರಿಯಾಗಿದೆ. ಇಂತಹ ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆರೋಗ್ಯಕೇಂದ್ರಗಳನ್ನು ಮೀರಿಸಬೇಕು” ಎಂದರು.
ಜಿ.ಎನ್.ಆರ್. ಬಾಬು, ಡಾ. ಅನುಪಮ (ಆರೋಗ್ಯ ಅಧಿಕಾರಿ), ಆಸ್ಪತ್ರೆ ಸಿಬ್ಬಂದಿ ಮತ್ತು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Post Comment