ದೆಹಲಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿಯಾಗಿ ಪ್ರಸ್ತಾಪಿಸಿದ ಸಚಿವ ರಾಮಲಿಂಗಾ ರೆಡ್ಡಿ
ದೆಹಲಿ: ಕರ್ನಾಟಕ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರು ದೆಹಲಿಯಲ್ಲಿ ಕೇಂದ್ರ ಭಾರೀ ಕೈಗಾರಿಕೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿಯನ್ನು ಭೇಟಿಯಾಗಿ, ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದರು.

ಈ ಭೇಟಿಯಲ್ಲಿ ಪ್ರಧಾನಮಂತ್ರಿ e-Drive ಯೋಜನೆಯಡಿಯಲ್ಲಿ ಬೆಂಗಳೂರು ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ GCC ಮಾದರಿಯ ಎಲೆಕ್ಟ್ರಿಕ್ ಬಸ್‌ಗಳನ್ನೂ ಒದಗಿಸುವಂತೆ ಸಚಿವರು ಮನವಿ ಮಾಡಿದರು. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಸಮಗ್ರ ಸಾರಿಗೆ ವ್ಯವಸ್ಥೆ ಮತ್ತು last mile connectivity ಒದಗಿಸಲು, ಮಾಲಿನ್ಯ ಹಿಗ್ಗುವುದನ್ನು ತಡೆಯಲು ಈ ಬಸ್‌ಗಳು ಅವಶ್ಯಕವೆಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಎಲೆಕ್ಟ್ರಿಕ್ ಬಸ್ ಘಟಕಗಳು ಹಾಗೂ ಚಾರ್ಜಿಂಗ್ ಸ್ಟೇಶನ್‌ಗಳನ್ನು ಸ್ಥಾಪಿಸಲು ಆರ್ಥಿಕ ಅನುದಾನ ನೀಡುವಂತೆ ಆಗ್ರಹಿಸಲಾಯಿತು. ಖಾಸಗಿ ಚಾಲಕರ ಬದಲು ಸಂಸ್ಥೆಯ ಚಾಲಕರನ್ನು ಬಳಸಲು ಅವಕಾಶ ನೀಡಬೇಕೆಂದು ಪ್ರಸ್ತಾಪಿಸಲಾಯಿತು.

GST ಸುಧಾರಣೆಯ ಕುರಿತು ಮಾತನಾಡಿದ ಅವರು, ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಲಾಭ ಸಿಗದ ಕಾರಣ ಬಿಡ್ಡರ್‌ಗಳ ದರ ಹೆಚ್ಚುತ್ತಿರುವುದಾಗಿ ವಿವರಿಸಿದರು. ಭವಿಷ್ಯದ ಬಿಡ್ಡಿಂಗ್‌ನಲ್ಲಿ GST ಒಳಗೊಂಡ ದರಗಳನ್ನು ಕಡ್ಡಾಯಗೊಳಿಸಬೇಕೆಂದು ಮನವಿ ಮಾಡಿದರು.
ಅಲ್ಲದೆ, ವಿದ್ಯುತ್ ಪೂರೈಕೆಗಾಗಿ ESCOM ಗಳು ಮಾತ್ರವಲ್ಲದೆ ಬಿಡ್ಡರ್‌ಗಳಿಗೆ ತಮ್ಮದೇ ಕ್ಯಾಪ್ಟಿವ್ ಪವರ್ ಬಳಸಲು ಅನುಮತಿಸುವಂತೆ ಕೇಳಿಕೊಳ್ಳಲಾಯಿತು, ಇದರಿಂದ ವಿದ್ಯುತ್ ವೆಚ್ಚ ಕಡಿಮೆಯಾಗಲಿದೆ.
Dry Lease ಆಯ್ಕೆಯನ್ನು ಒಳಗೊಂಡಂತೆ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಮಾನವ ಸಂಪತ್ತನ್ನು ಬಳಸಿಕೊಂಡು, ವೇಗವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅವಕಾಶ ನೀಡುವಂತೆ ಪ್ರಸ್ತಾಪಿಸಿದರು.
ಇದೆಲ್ಲವೂ ಸಾರಿಗೆ ಸಂಸ್ಥೆಗಳಿಗೆ ಪ್ರಯೋಜನಕಾರಿಯಾಗಿದ್ದು, ಸಾರ್ವಜನಿಕರಿಗೆ ಉತ್ತಮ ಸೇವೆ ದೊರಕುವಂತೆ ಮಾಡಲಿದೆ ಎಂದು ರಾಮಲಿಂಗಾ ರೆಡ್ಡಿಯವರು ಸ್ಪಷ್ಟಪಡಿಸಿದರು.
ಸಚಿವ ರಾಮಲಿಂಗಾ ರೆಡ್ಡಿ ಅವರ ಮನವಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
Post Comment