×

ನವ ಕರ್ನಾಟಕ ಯುವ ಶಕ್ತಿ ವೇದಿಕೆಯ ಸಮಾಜಮುಖಿ ಹೆಜ್ಜೆ: ‘ನಮ್ಮ ರೈತ ನಮ್ಮ ಸ್ಟಾರ್’ ಪ್ರಶಸ್ತಿ ಪ್ರಕಟಣೆ

ವಿದುರಾಶ್ವತ್ಥ ದನಗಳ ಜಾತ್ರೆ ಅಂಗವಾಗಿ ನವ ಕರ್ನಾಟಕ ಯುವ ಶಕ್ತಿ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾದ “ಉಚಿತ ಜಾನುವಾರು ಮೇವು ವಿತರಣೆ” ಕಾರ್ಯಕ್ರಮದ ಪೋಸ್ಟರ್‌ನ್ನು ಜನಪ್ರಿಯ ಶಾಸಕರಾದ ಶ್ರೀ ಪುಟ್ಟಸ್ವಾಮಿ ಗೌಡ ಅವರು ಅಧಿಕೃತವಾಗಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರೇ ದೇಶದ ಬೆನ್ನೆಲುಬು ಎಂದು ಪ್ರಶಂಸಿಸಿ, ಜಾನುವಾರುಗಳ ಪಾಲನೆ ಹಾಗೂ ರೈತರ ಕಲ್ಯಾಣಕ್ಕಾಗಿ ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯವೆಂದು ಹೇಳಿದರು. ನವ ಕರ್ನಾಟಕ ಯುವ ಶಕ್ತಿ ವೇದಿಕೆಯ ಈ ಕಾರ್ಯ ಶ್ಲಾಘನೀಯ ಎಂದರು.

ಇದೇ ವೇಳೆ “ನಮ್ಮ ರೈತ ನಮ್ಮ ಸ್ಟಾರ್–ನಮ್ಮ ಸೈನಿಕ ನಮ್ಮ ಸ್ಟಾರ್” ಎಂಬ ವಿಶೇಷ ಪ್ರಶಸ್ತಿಯನ್ನು ಘೋಷಿಸಲಾಯಿತು. ಹೊಲದಲ್ಲಿ ಹೋರಾಡುವ ರೈತರು ಮತ್ತು ಗಡಿಯಲ್ಲಿ ಹೋರಾಡುವ ಸೈನಿಕರು ದೇಶದ ನಿಜವಾದ ಹೀರೋಗಳು. ದೇಶದ ನೆಲ ಮತ್ತು ದೇಶದ ಗಡಿಯನ್ನು ಕಾಪಾಡುವ ಇವರಿಗೆ ಗೌರವ ಸಮರ್ಪಿಸುವ ಚಿಕ್ಕ ಪ್ರಯತ್ನವೇ ಈ ವಿಶೇಷ ಪ್ರಶಸ್ತಿ ಎಂದು ವೇದಿಕೆ ಸದಸ್ಯರು ತಿಳಿಸಿದರು.

ಕಾರ್ಯಕ್ರಮಕ್ಕೆ ವನಕಲ್ಲು ಮಲ್ಲೇಶ್ವರ ಮಠದ ಪರಮಪೂಜ್ಯ ಶ್ರೀ ಬಸವ ರಮಾನಂದ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ರೈತರ ಹಾಗೂ ಸೈನಿಕರ ಸೇವೆಯನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed