ಅಪರೂಪದ ಕ್ಷಣಗಳು; ಡಿಸ್‌ಪೋಸಿಬಲ್ ಕ್ಯಾಮೆರಾದಲ್ಲಿ ತೆಗೆದ ಫೋಟೊ ಹಂಚಿಕೊಂಡ ರಶ್ಮಿಕಾ
- Updated Wednesday Sep 09 2026
- / 9 Read

ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ, ಸಾಲು ಸಾಲು ಸಿನಿಮಾಗಳ ಚಿತ್ರೀಕರಣದಲ್ಲಿದ್ದಾರೆ. ವಿಜಯ್ ದೇವರಕೊಂಡ ನಟನೆಯ 'ರಣಬಾಲಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಅಕ್ಟೋಬರ್‌ನಲ್ಲಿ ತೆರೆಕಾಣಲಿದೆ.
ಈ ನಡುವೆ ರಶ್ಮಿಕಾ ಮಂದಣ್ಣ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಡಿಸ್‌ಪೋಸಿಬಲ್ ಕ್ಯಾಮೆರಾದಿಂದ ಕ್ಲಿಕ್ಕಿಸಿದ ಕೆಲವು ಅಪರೂಪದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಇವು ಅಚ್ಚುಮೆಚ್ಚಿನ ಫೋಟೊಗಳು ಎಂದಿರುವ ರಶ್ಮಿಕಾ, 'ನಿಜವಾಗಿಯೂ ಇವು ತುಂಬಾ ಇಷ್ಟವಾಗಿವೆ. ಈ ಫೋಟೊಗಳಲ್ಲಿ ಕೂದಲು ಸರಿಪಡಿಸಿ ಬೇರೆ ಪೋಸ್ ಕೊಡಿ ಎನ್ನುವುದಕ್ಕೆ ಅವಕಾಶವಿಲ್ಲ. ಒಂದು ಉತ್ತಮ ಚಿತ್ರಕ್ಕಾಗಿ 1,000 ಫೋಟೊಗಳನ್ನು ತೆಗೆಸಿಕೊಳ್ಳುವ ಅಭ್ಯಾಸವಿದೆ. ಆದರೂ ಈ ಫೋಟೊಗಳು ಬಹಳ ವಿಶೇಷ ಅನಿಸುತ್ತಿವೆ' ಎಂದು ಬರೆದುಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಟನೆಯ 'ರಣಬಾಲಿ' ಸಿನಿಮಾ ಅಕ್ಟೋಬರ್ 16ರಂದು ವಿಶ್ವದಾದ್ಯಂತ ಬಿಡುಗಡೆಗೊಳ್ಳಲಿದೆ. 7 ವರ್ಷಗಳ ಬಳಿಕ ತೆರೆಯ ಮೇಲೆ ಈ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

Share News
For Add News Review. You Need To Login First Login Page
-
LATEST
-
POPULAR




