Friday 11-09-2026

Duleep Trophy: ಏಕಾಂಗಿ ಹೋರಾಟ ನಡೆಸುತ್ತಿದ್ದ ತಿಲಕ್‌ ವರ್ಮಾರನ್ನು ಸ್ಲೆಡ್ಜ್‌ ಮಾಡಿದ ವೈಭವ್‌ ಸೂರ್ಯವಂಶಿ!

Posted By: Owner
  • Updated Wednesday Sep 09 2026
  • / 6 Read

Duleep Trophy: ಏಕಾಂಗಿ ಹೋರಾಟ ನಡೆಸುತ್ತಿದ್ದ ತಿಲಕ್‌ ವರ್ಮಾರನ್ನು ಸ್ಲೆಡ್ಜ್‌ ಮಾಡಿದ ವೈಭವ್‌ ಸೂರ್ಯವಂಶಿ!

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026ರ ದುಲೀಪ್‌ ಟ್ರೋಫಿ (Duleep Trophy 2026) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಪೂರ್ವ ವಲಯ ಹಾಗೂ ದಕ್ಷಿಣ ವಲಯ ತಂಡಗಳು ಕಾದಾಟ ನಡೆಸುತ್ತಿವೆ. ನಾಲ್ಕನೇ ದಿನದಾಟದ ವೇಳೆಯಲ್ಲಿ ಇಶಾನ್‌ ಕಿಶನ್‌ ನಾಯಕತ್ವದ ಪೂರ್ವ ವಲಯ ತಂಡ ಪಂದ್ಯದ ಮೇಲೆ ತನ್ನ ಬಿಗಿ ಹಿಡಿತವನ್ನು ಮುಂದುವರಿಸಿದೆ.

ಇದರ ನಡುಎ ದಕ್ಷಿಣ ವಲಯ ನಾಯಕ ತಿಲಕ್‌ ವರ್ಮಾ (Tilak Verma) ಅವರನ್ನು ಉಪ ನಾಯಕ ವೈಭವ್‌ ಸೂರ್ಯವಂಶಿ (Vaibhav Sooryavanshi) ಸ್ಲೆಡ್ಜ್‌ ಮಾಡಿ ತಿರುಗೇಟು ನೀಡಿದ್ದಾರೆ.

ಪಂದ್ಯದ ಮೊದಲ ದಿನ ತಿಲಕ್ ವರ್ಮಾ ಅವರಿಂದ ಕೆಲವು ಮಾತುಗಳನ್ನು ಕೇಳಿಸಿಕೊಂಡಿದ್ದ ವೈಭವ್, ನಾಲ್ಕನೇ ದಿನ ದಕ್ಷಿಣ ವಲಯ ನಾಯಕನ ಬಳಿಗೆ ತೆರಳಿ ತಾವೂ ಕೆಲವು ಮಾತುಗಳನ್ನು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. ನಾಲ್ಕನೇ ದಿನದ ಬೆಳಗಿನ ಅವಧಿಯ ಅಂತ್ಯದ ವೇಳೆಗೆ ಈ ಘಟನೆ ನಡೆಯಿತು. ಆಗ ದಕ್ಷಿಣ ವಲಯ ಈಗಾಗಲೇ ಎಂಟು ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನತ್ತ ಸಾಗುತ್ತಿತ್ತು.

ಈಸ್ಟ್‌ ಝೋನ್‌ ಮೊದಲ ಇನಿಂಗ್ಸ್‌ನಲ್ಲಿ ದಾಖಲಿಸಿದ್ದ ಭರ್ಜರಿ 708 ರನ್‌ಗಳ ಮೊತ್ತವನ್ನು ಬೆನ್ನಟ್ಟುತ್ತಿದ್ದ ಸೌತ್‌ ಝೋನ್‌, ಬ್ಯಾಟಿಂಗ್‌ಗೆ ಉತ್ತಮವಾಗಿದ್ದ ಪಿಚ್‌ನಲ್ಲೂ 330 ರನ್‌ಗಳ ಗಡಿ ತಲುಪುವ ಮುನ್ನವೇ ಎಂಟು ವಿಕೆಟ್‌ ಕಳೆದುಕೊಂಡಿತ್ತು. ಒಂದೆಡೆಯಿಂದ ತಿಲಕ್‌ ವರ್ಮಾ ಹೋರಾಟ ಮುಂದುವರಿಸಲು ಪ್ರಯತ್ನಿಸುತ್ತಿದ್ದಾಗ, ವೈಭವ್ ಬ್ಯಾಟರ್‌ ಬಳಿ ತೆರಳಿ ಕೆಲ ಮಾತುಗಳನ್ನು ವಿನಿಮಯ ಮಾಡಿಕೊಂಡರು. ಬಳಿಕ ಯಾವುದೇ ಗಡಿಬಿಡಿಯಿಲ್ಲದೆ ಅಲ್ಲಿಂದ ಹಿಂದೆ ಸರಿದರು.

Tags :

Share News


For Add News Review. You Need To Login First Login Page